Thursday, December 20, 2018

ಭುಜದ ಬದಲಿ ಶಸ್ತ್ರಚಿಕಿತ್ಸೆ

ಮನುಷ್ಯನ ದೇಹದಲ್ಲಿ ಅತ್ಯಂತ ಅವಶ್ಯಕವಾಗಿರುವ ಅಂಗಗಳಲ್ಲಿ ಭುಜಗಳೂ ಸಹ ಬರುತ್ತವೆನಮ್ಮ ಭುಜಗಳು ಕೈಗಳನ್ನು ಮೇಲೆ ಕೆಳಗೆಹಿಂದೆ ಮುಂದೆಹಾಗೂ ವರ್ತುಲಾಕಾರವಾಗಿ ಚಲಿಸಲು ಸಹಕರಿಸುತ್ತವೆಈ ಭುಜವು ಮೂರು ಮೂಳೆಗಳಿಂದ ಜೋಡಿಸಲ್ಪಟ್ಟಿರುತ್ತದೆ.1.ಕುತ್ತಿಗೆಯ ಕೆಳಗಿನ ಅಡ್ಡ ಮೂಳೆ.2. ಭುಜದ ಮೂಳೆ (Gleneohumeral joint).3. ಮೇಲ್ದೋಳಿನ ಮೂಳೆಈ ಮೂರೂ ಮೂಳೆಗಳನ್ನು ಸ್ನಾಯುಗಳು ಹೊದಿಕೆಯಂತೆ ಆವರಿಸಿರುತ್ತವೆ.

ಭುಜದ ತೋಳಿನ ಮೂಳೆಯ ಮೇಲ್ಬಾಗದ ತುದಿಯು ಒಂದು ‌ ಚೆಂಡಿನ ಆಕಾರದಲ್ಲಿರುತ್ತದೆಇದು ಕೈಗಳ ಚಲಿಸುವಿಕೆಗೆ ಸಹಾಯ ಮಾಡುತ್ತದೆಈ ಭಾಗದ ಮೂಳೆಗಳು ಮತ್ತು ಸ್ನಾಯುಗಳು ಹಲವಾರು ಕಾರಣಗಳಿಂದ ಹಾನಿಗೊಳಗಾಗುತ್ತವೆ..ಆಗ ಭುಜದ ಬದಲಿ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆಸಾಮಾನ್ಯವಾಗಿ,
  • Osteoarthritis ಕೆಲವು ಸಲ ಮೇಲ್ದೋಳಿನ ಮೂಳೆಯು ಸವೆತಕ್ಕೊಳಗಾಗುತ್ತದೆ ಮತ್ತು ಸವೆತದಿಂದಾಗಿ ಮುರಿಯಲೂಬಹುದುಆಗ ಭುಜದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು.ಇಂತಹ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯು ಅನುಕೂಲವಾಗುತ್ತದೆ.
  • Rheumatoid arthritis ಭುಜದ ಸ್ನಾಯುಗಳಲ್ಲಿ ಕೆಲವೊಮ್ಮೆಉರಿಯೂತ ಮತ್ತು ನೋವು ಕಾಣಿಸಿಕೊಳ್ಳಬಹುದುಆಗ ಶಸ್ತ್ರಚಿಕಿತ್ಸೆಯ ಮೊರೆ ಹೋಗಬಹುದು.
  • Post-traumatic arthritis ಕೆಲವೊಮ್ಮೆ ಹಿಂದೆ ಯಾವುದೋ ಕಾರಣದಿಂದ ನಮ್ಮ ಭುಜವು ಹಾನಿಗೊಳಗಾಗಿರುತ್ತದೆಕೆಲವು ದಿನಗಳ ನಂತರ ಅಥವಾ ಕೆಲವು ವರ್ಷಗಳ ನಂತರ ಆ ನೋವು ಮರುಕಳಿಸಬಹುದು.ಇಂತಹ ಸಂದರ್ಭದಲ್ಲಿ ವೈದ್ಯರುಗಳು ಶಸ್ತ್ರಚಿಕಿತ್ಸೆಯ ಸಲಹೆ ನೀಡಬಹುದು.
  • Rotator cuff tear arthropathy ನಮ್ಮ ಭುಜದ ಮೂಳೆಗಳ ಆವರ್ತಕ ಪಟ್ಟಿಗಳು (rotator cuff) ಸ್ನಾಯುಗಳಿಂದ ಆವರಿಸಿರುತ್ತವೆ.ಈ ಆವರ್ತಕ ಪಟ್ಟಿಗಳು ಕೆಲವೊಮ್ಮೆ ಹಾನಿಗೊಳಗಾಗಬಹುದು ಅಥವಾ ಹರಿಯಲೂಬಹುದುಆಗ ಶಸ್ತ್ರಚಿಕಿತ್ಸೆಯನ್ನು ಮಾಡಿಸಬೇಕಾಗುತ್ತದೆ.
  • AVN- Avascular Necrosis ಭುಜದ ಮೂಳೆಗಳಲ್ಲಿನ ಅಂಗಾಂಶಗಳು (bone tissues) ಕೆಲವೊಮ್ಮೆ ನಿರ್ಜೀವವಾಗಿರುತ್ತವೆ.ಆಗ ಭುಜದ ಮೂಳೆಗಳಿಗೆ ರಕ್ತ ಸಂಚಾರವು ಸರಿಯಾಗಿ ಆಗುವುದಿಲ್ಲಇಂತಹ ಸಂದರ್ಭದಲ್ಲಿಯೂ ಸಹ ಭುಜದ ಬದಲಿ ಶಸ್ತ್ರಚಿಕಿತ್ಸೆಯ ಮೊರೆ ಹೋಗಬಹುದು.

ಶಸ್ತ್ರಚಿಕಿತ್ಸೆ


ಭುಜದ ಬದಲಿ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು ಭುಜದ ಮೇಲ್ಬಾಗದ ಚೆಂಡಿನಾಕಾರದ ಭಾಗವನ್ನು ಕತ್ತರಿಸಿಆಯಾ ರೋಗಿಗಳ ಮೂಳೆಯ ಗಾತ್ರಕ್ಕನುಗುಣವಾಗಿ ಭುಜದ ಮೂಳೆಯ ಕತ್ತರಿಸಿದ ಭಾಗಕ್ಕೆ ಒಂದು ಉದ್ದವಾದ ಲೋಹದ ಸಲಕರಣೆಯನ್ನು ಅಳವಡಿಸುತ್ತಾರೆ.ಈ ಲೋಹದ ಸಲಕರಣೆಯ ತುದಿಯೂ ಸಹ ಚೆಂಡಿನಾಕಾರದಲ್ಲಿ ಇರುತ್ತದೆಕೃತಕ ಭುಜದ ಮೂಳೆಯನ್ನು ಮೇಲ್ದೋಳಿನ ಮೂಳೆಯೊಂದಿಗೆ ಕೆಲವು ಲೋಹದ ಅಥವಾ ಪ್ಲಾಸ್ಟಿಕ್ ಸಲಕರಣೆಗಳ ಸಹಾಯದಿಂದ ಜೋಡಿಸಲಾಗುತ್ತದೆ

ಶಸ್ತ್ರಚಿಕಿತ್ಸೆಗೂ ಮುನ್ನ

  • ರೋಗಿಯು ಶಸ್ತ್ರಚಿಕಿತ್ಸೆಗೂ ಮುನ್ನ ಪ್ರತಿಜೀವಕ (antibiotics) ಔಷಧಗಳನ್ನು ತೆಗೆದುಕೊಳ್ಳಲು ವೈದ್ಯರು ಸೂಚಿಸುತ್ತಾರೆ.
  • ರೋಗಿಯ ಸಂಪೂರ್ಣ ಆರೋಗ್ಯ ತಪಾಸಣೆಯನ್ನೂ ಮಾಡಲಾಗುವುದುಮಾಡಲಾಗುವುದುಮತ್ತು ರೋಗಿಯ ಸಂಪೂರ್ಣ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯಾವ ಅರವಳಿಕೆ ಮದ್ದನ್ನು ನೀಡಬೇಕೆಂದು ವೈದ್ಯರು ನಿರ್ಧರಿಸುತ್ತಾರೆ.

ಶಸ್ತ್ರಚಿಕಿತ್ಸೆಯ ನಂತರ.

  • ಶಸ್ತ್ರಚಿಕಿತ್ಸೆಯ ನಂತರ ಪ್ರತಿಜೀವಕ ಔಷಧಗಳನ್ನು ಮತ್ತು ನೋವು ನಿವಾರಕ ಔಷಧಗಳನ್ನು ವೈದ್ಯರು ತಿಳಿಸಿದಷ್ಟು ದಿವಸ ತೆಗೆದುಕೊಳ್ಳಬೇಕಾಗಬಹುದು.
  • ನಿಮ್ಮ ಭುಜದಲ್ಲಿ ನೀವು ಸಂಕೋಚನ ತೋಳುಗಳನ್ನು (compression sleeves) ಸಹ ಹೊಂದಿರಬಹುದುಇವು ರಕ್ತ ಪರಿಚಲನೆಯನ್ನು ಸರಾಗವಾಗಿಸುತ್ತವೆ ಹಾಗೂ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತವೆ.
  • ಶಸ್ತ್ರಚಿಕಿತ್ಸೆಯ ಒಂದು ದಿನದ ನಂತರ ದೈಹಿಕ ಚಿಕಿತ್ಸಕರು(physical therapists) ಭುಜದ ಸುಲಭ ವ್ಯಾಯಾಮವನ್ನು ಮಾಡಿಸಲು ಪ್ರಾರಂಭಿಸುತ್ತಾರೆ.
  • ಶ್ವಾಸಕೋಶದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ವೈದ್ಯರು ಕೆಲವು ಉಸಿರಾಟದ ವ್ಯಾಯಾಮಗಳನ್ನೂ ಸಹ ಹೇಳಿಕೊಡಬಹುದು.
ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಸುಮಾರು 53000 ಜನ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆಆದರೆ ಭಾರತದಂತಹ ರಾಷ್ಟ್ರಗಳಲ್ಲಿ ಭುಜದ ಶಸ್ತ್ರಚಿಕಿತ್ಸೆಯಂತಹ ಅನುಕೂಲಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮತ್ತು ಹೆಚ್ಚಿನ ಮಾಹಿತಿ ಇಲ್ಲ.
ಆದರೆ ಭುಜದ ಶಸ್ತ್ರಚಿಕಿತ್ಸೆಯಲ್ಲಿ ತಾಂತ್ರಿಕವಾಗಿ ತರಬೇತಿಯನ್ನು ಪಡೆದಂತಹ ವೈದ್ಯರುಗಳ ಸೌಲಭ್ಯವನ್ನು ಭಾರತದಲ್ಲಿಯೇ ಪಡೆಯಬಹುದು ಎಂದು ಡಾಬ್ಯಾನರ್ಜಿ , Shoulder Specialist ರವರು ಹೇಳುತ್ತಾರ.
ಭುಜದ ಕೀಲುಗಳ ಮತ್ತು ಮೂಳೆಗಳ ಯಾವುದೇ ತೊಂದರೆಗಳು ಬಾಹ್ಯ ಚಿಕಿತ್ಸೆಗಳಿಂದ ಮತ್ತು ನೋವು ನಿವಾರಕ ಚುಚ್ಚು ಮದ್ದುಗಳನ್ನುಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಮತ್ತು ವ್ಯಾಯಾಮಗಳನ್ನು ಮಾಡುವುದರಿಂದ ನೋವು ಕಡಿಮೆಯಾಗದ್ದಿದ್ದಲ್ಲಿ ಅವುಗಳೊಟ್ಟಿಗೆ ಭುಜದ ಬದಲಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕ್ಕೊಳುವುದರಿಂದ ಅಂತಹ ಎಲ್ಲ ತೊಂದರೆಗಳಿಂದ ಮುಕ್ತವಾಗಬಹುದು.

Mail us : bans75@yahoo.com
Book an appointment : orthobangalore.com/book-appointment

No comments:

Post a Comment